ಜನರೇಟಿವ್ AI ನಿಷೇಧಿತ ಬಳಕೆಗೆ ಸಂಬಂಧಿಸಿದ ನೀತಿ
ಕೊನೆಯ ಬಾರಿ ಮಾರ್ಪಡಿಸಿರುವುದು: ಡಿಸೆಂಬರ್ 17, 2024
ಜನರೇಟಿವ್ AI ಮಾದರಿಗಳು ನಿಮಗೆ ಎಕ್ಸ್‌ಪ್ಲೋರ್ ಮಾಡಲು, ಕಲಿಯಲು ಮತ್ತು ರಚಿಸಲು ಸಹಾಯ ಮಾಡಬಹುದು. ನೀವು ಅವುಗಳೊಂದಿಗೆ ಜವಾಬ್ದಾರಿಯುತ, ಕಾನೂನು ಮತ್ತು ಸುರಕ್ಷಿತ ರೀತಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಾವು ನಿರೀಕ್ಷಿಸುತ್ತೇವೆ. ಈ ನೀತಿಯನ್ನು ಉಲ್ಲೇಖಿಸುವ Google ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಜನರೇಟಿವ್ AI ನೊಂದಿಗೆ ನಿಮ್ಮ ಸಂವಾದಗಳಿಗೆ ಈ ಕೆಳಗಿನ ನಿರ್ಬಂಧಗಳು ಅನ್ವಯಿಸುತ್ತವೆ.
- ಅಪಾಯಕಾರಿ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಬೇಡಿ, ಅಥವಾ ಅನ್ವಯಿಸುವ ಕಾನೂನು ಅಥವಾ ನಿಯಮಗಳನ್ನು ಉಲ್ಲಂಘಿಸಬೇಡಿ. ಇದು ಈ ಕೆಳಗಿನ ಕಂಟೆಂಟ್ ಅನ್ನು ರಚಿಸುವುದು ಅಥವಾ ವಿತರಿಸುವುದನ್ನು ಒಳಗೊಂಡಿರುತ್ತದೆ:
- ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಶೋಷಣೆಗೆ ಸಂಬಂಧಿಸಿರುವುದು.
- ಅತಿರೇಕದ ಹಿಂಸೆ ಅಥವಾ ಭಯೋತ್ಪಾದನೆಯನ್ನು ಉತ್ತೇಜಿಸುವಂತಹದ್ದು.
- ಖಾಸಗಿ ಕ್ಷಣಗಳ ಒಪ್ಪಿಗೆಯಿಲ್ಲದ ಚಿತ್ರಣವನ್ನು ಉತ್ತೇಜಿಸುವಂತಹದ್ದು.
- ಸ್ವಯಂ-ಹಾನಿಯನ್ನು ಉತ್ತೇಜಿಸುವಂತಹದ್ದು.
- ಕಾನೂನುಬಾಹಿರ ಚಟುವಟಿಕೆಗಳು ಅಥವಾ ಕಾನೂನಿನ ಉಲ್ಲಂಘನೆಗಳನ್ನು ಉತ್ತೇಜಿಸುವಂತಹದ್ದು - ಉದಾಹರಣೆಗೆ, ಅಕ್ರಮ ಅಥವಾ ನಿಯಂತ್ರಿತ ವಸ್ತುಗಳು, ಸರಕುಗಳು ಅಥವಾ ಸೇವೆಗಳನ್ನು ಸಂಶ್ಲೇಷಿಸುವಂತೆ ಅಥವಾ ಆ್ಯಕ್ಸೆಸ್ ಮಾಡುವಂತೆ ಸೂಚಿಸುವುದು.
- ಗೌಪ್ಯತೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳು ಸೇರಿದಂತೆ ಇತರರ ಹಕ್ಕುಗಳನ್ನು ಉಲ್ಲಂಘಿಸುವುದು - ಉದಾಹರಣೆಗೆ, ಕಾನೂನುಬದ್ಧವಾಗಿ-ಅಗತ್ಯವಿರುವ ಒಪ್ಪಿಗೆಯಿಲ್ಲದೆ ವೈಯಕ್ತಿಕ ಡೇಟಾ ಅಥವಾ ಬಯೋಮೆಟ್ರಿಕ್ಸ್ ಅನ್ನು ಬಳಸುವುದು.
- ಜನರನ್ನು ಅವರ ಸಮ್ಮತಿ ಇಲ್ಲದೆ ಟ್ರ್ಯಾಕ್ ಮಾಡುವುದು ಅಥವಾ ಮೇಲ್ವಿಚಾರಣೆ ಮಾಡುವುದು.
- ಹೆಚ್ಚು ಅಪಾಯಕ್ಕೀಡಾಗಬಹುದಾದ ಡೊಮೇನ್‌ಗಳಲ್ಲಿ ಮಾನವ ಮೇಲ್ವಿಚಾರಣೆಯಿಲ್ಲದೆ ವೈಯಕ್ತಿಕ ಹಕ್ಕುಗಳ ಮೇಲೆ ಮಹತ್ವದ ಹಾನಿಕಾರಕ ಪರಿಣಾಮವನ್ನು ಹೊಂದಿರುವ ಸ್ವಯಂಚಾಲಿತ ನಿರ್ಧಾರಗಳನ್ನು ಮಾಡುವುದು - ಉದಾಹರಣೆಗೆ, ಉದ್ಯೋಗ, ಆರೋಗ್ಯ, ಹಣಕಾಸು, ಕಾನೂನು, ವಸತಿ, ವಿಮೆ ಅಥವಾ ಸಾಮಾಜಿಕ ಕಲ್ಯಾಣದಲ್ಲಿ.
- ಇತರರ ಅಥವಾ Google ನ ಸೇವೆಗಳ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳಬೇಡಿ. ಇದು ಈ ಕೆಳಗಿನ ಕಂಟೆಂಟ್‌ನ ರಚನೆ ಅಥವಾ ವಿತರಣೆಯನ್ನು ಒಳಗೊಂಡಿರುತ್ತದೆ:
- ಸ್ಪ್ಯಾಮ್, ಫಿಶಿಂಗ್ ಅಥವಾ ಮಾಲ್‌ವೇರ್.
- Google ನ ಅಥವಾ ಇತರರ ಮೂಲಸೌಕರ್ಯ ಅಥವಾ ಸೇವೆಗಳಿಗೆ ದುರುಪಯೋಗ, ಹಾನಿ, ಹಸ್ತಕ್ಷೇಪ ಅಥವಾ ಅಡ್ಡಿಪಡಿಸುವುದು.
- ದುರುಪಯೋಗ ತಡೆಗಟ್ಟುವುದು ಅಥವಾ ಭದ್ರತೆ-ಸಂಬಂಧಿತ ಫಿಲ್ಟರ್‌ಗಳನ್ನು ಮೋಸದಿಂದ ತಪ್ಪಿಸುವುದು -- ಉದಾಹರಣೆಗೆ, ನಮ್ಮ ನೀತಿಯನ್ನು ಉಲ್ಲಂಘಿಸುವ ಮಾದರಿಯನ್ನು ಕುಶಲತೆಯಿಂದ ನಿರ್ವಹಿಸುವುದು.
- ಅಶ್ಲೀಲ, ಹಿಂಸಾತ್ಮಕ, ದ್ವೇಷಪೂರಿತ ಅಥವಾ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಬೇಡಿ. ಇದು ಈ ಕೆಳಗಿನ ಕಂಟೆಂಟ್ ಅನ್ನು ರಚಿಸುವುದು ಅಥವಾ ವಿತರಿಸುವುದನ್ನು ಒಳಗೊಂಡಿರುತ್ತದೆ:
- ದ್ವೇಷ ಅಥವಾ ದ್ವೇಷಪೂರಿತ ಮಾತು.
- ಕಿರುಕುಳ, ನಿಂದನೆ, ಬೆದರಿಕೆ, ದುರುಪಯೋಗ ಅಥವಾ ಇತರರನ್ನು ಅವಮಾನಿಸುವುದು.
- ಹಿಂಸೆ ಅಥವಾ ಹಿಂಸೆಯ ಪ್ರಚೋದನೆ.
- ಲೈಂಗಿಕವಾಗಿ ಅಶ್ಲೀಲ ಕಂಟೆಂಟ್ -- ಉದಾಹರಣೆಗೆ, ಅಶ್ಲೀಲತೆ ಅಥವಾ ಲೈಂಗಿಕ ತೃಪ್ತಿಯ ಉದ್ದೇಶಕ್ಕಾಗಿ ರಚಿಸಲಾದ ಕಂಟೆಂಟ್.
- ತಪ್ಪು ಮಾಹಿತಿ, ತಪ್ಪು-ಪ್ರತಿನಿಧಿತ್ವ ಅಥವಾ ದಾರಿ ತಪ್ಪಿಸುವ ಚಟುವಟಿಕೆಗಳಲ್ಲಿ ತೊಡಗಬೇಡಿ. ಅದು ಇವುಗಳನ್ನು ಒಳಗೊಂಡಿದೆ
- ವಂಚನೆಗಳು, ಸ್ಕ್ಯಾಮ್‌ಗಳು ಅಥವಾ ಇತರ ಮೋಸಗೊಳಿಸುವ ಕ್ರಿಯೆಗಳು.
- ಸತ್ಯವನ್ನು ಸ್ಪಷ್ಟವಾಗಿ ಬಹಿರಂಗಪಡಿಸದೆ ಇತರರನ್ನು ವಂಚಿಸುವ ಉದ್ದೇಶದಿಂದ ಬೇರೆ ವ್ಯಕ್ತಿಯ ರೀತಿ (ಜೀವಂತ ಅಥವಾ ಸತ್ತ) ಸೋಗು ಹಾಕುವುದು.
- ಸೂಕ್ಷ್ಮ ಭಾಗಗಳಲ್ಲಿ ಪರಿಣತಿ ಅಥವಾ ಸಾಮರ್ಥ್ಯದ ಕುರಿತು ಹಾದಿ ತಪ್ಪಿಸುವ ಕ್ಲೇಮ್‌ಗಳಿಗೆ ಉತ್ತೇಜನ ನೀಡುವುದು -- ಉದಾಹರಣೆಗೆ ಆರೋಗ್ಯ, ಹಣಕಾಸು, ಸರ್ಕಾರಿ ಸೇವೆಗಳು ಅಥವಾ ಕಾನೂನಿನಲ್ಲಿ, ಮೋಸಗೊಳಿಸುವ ಸಲುವಾಗಿ.
- ವಂಚನೆಯ ಉದ್ದೇಶದಿಂದ ಸರ್ಕಾರಿ ಅಥವಾ ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಅಥವಾ ಹಾನಿಕಾರಕ ಆರೋಗ್ಯ ಅಭ್ಯಾಸಗಳಿಗೆ ಸಂಬಂಧಿಸಿದಂತೆ ಹಾದಿತಪ್ಪಿಸುವ ಕ್ಲೇಮ್‌ಗಳಿಗೆ ಉತ್ತೇಜನ ನೀಡುವುದು.
- ಮೋಸಗೊಳಿಸುವ ಸಲುವಾಗಿ ಮಾನವನಿಂದ ಮಾತ್ರ ರಚಿಸಲಾಗಿದೆ ಎಂದು ಹೇಳುವ ಮೂಲಕ, AI ರಚಿತವಾದ ಕಂಟೆಂಟ್ ಮೂಲವನ್ನು ತಪ್ಪಾಗಿ ಪ್ರತಿನಿಧಿಸುವುದು.
ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಪರಿಗಣನೆಗಳ ಆಧಾರದ ಮೇಲೆ ಅಥವಾ ಇದರಿಂದಾಗಬಹುದಾದ ಹಾನಿಯನ್ನೂ ಮೀರಿ ಸಾರ್ವಜನಿಕರಿಗೆ ಪ್ರಯೋಜನವಾಗಬಹುದಾದ ಸಂದರ್ಭಗಳಲ್ಲಿ ನಾವು ಈ ನೀತಿಗೆ ವಿನಾಯಿತಿಗಳನ್ನು ನೀಡಬಹುದು.